LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

*ಲಿಂಗಾಯತ ಬಿಸಿನೆಸ್ ಫೋರಂ ಮಹಿಳಾ ವಿಭಾಗದ ಉದ್ಘಾಟನೆ-ಪದಗ್ರಹಣ*

ಬೆಳಗಾವಿಯ ಲಿಂಗಾಯತ ಬಿಸಿನೆಸ್ ಫೊರಮ್ನ ಮಹಿಳಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವು ಇತ್ತೀಚೆಗೆ ನಗರದ ಹೊರವಲಯದ ಕಾಕತಿ ವುಡ್ರೋಸ್ ಹೋಟೆಲ್ ಸಭಾಭವನದಲ್ಲಿ ನೆರವೇರಿತು.

ಉದ್ಯಮಿ ಅಜಿತ ಪಾಟೀಲ ಅವರು ಮಹಿಳಾ ಘಟಕವನ್ನು ಉದ್ಘಾಟಸಿ ಮಾತನಾಡಿ, ಪ್ರತಿ ಭಾರತೀಯ ಮಹಿಳೆ ಹುಟ್ಟುತ್ತಲೇ ಮನೆಯಲ್ಲಿ ಸ್ವಾಭಾವಿಕವಾಗಿ ದೈನಂದಿನ ಕೆಲಸ ಕಲಿಯುತ್ತಾ ಉದ್ಯಮಶೀಲತೆಯನ್ನು ಸಹಜವಾಗಿ ಮೈಗೂಡಿಸಿಕೊಂಡಿರುತ್ತಾಳೆ.  ಆದರೆ ಬಹಳಷ್ಟು ಜನ ಆ ಪ್ರತಿಭೆಯನ್ನು ಮತ್ತು ಕೌಶಲ್ಯವನ್ನು ಅಧಿಕೃತವಾಗಿ ಬಳಸದೆ ಉದ್ಯಮಿ ಆಗುವುದರಲ್ಲಿ ಹಿಂಜರಿಯುತ್ತಿರುವದು ನಮ್ಮ ಸಮಾಜದ ದೌರ್ಭಾಗ್ಯ. ಮಹಿಳೆಯರು ಈ ದೇಶದ ಬೆನ್ನೆಲುಬು ಆಗಿದ್ದಾರೆ. ಇವರಿಂದ ಪರಿಪೂರ್ಣವಾಗಿ ದೇಶದ ಏಳಿಗೆ ಸಾಧ್ಯ. ಬೆಳಗಾವಿಯ ಪ್ರತಿಭೆಗಳು ಮರಳಿ ಬಂದು ಇಲ್ಲಿಯೇ ಮಹಾ ಸಾಧನೆ ಮಾಡಲು ಯೋಗ್ಯ ಪೂರಕವಾದ ವಾತಾವರಣ ನಿರ್ಮಾಣ ಮಾಡುವದು ಅತ್ಯವಶ್ಯ. ಈ ನಿಟ್ಟಿನಲ್ಲಿ ಲಿಂಗಾಯತ ಬಿಸಿನೆಸ್ ಫೋರಂ ಬೆಳವಣಿಗೆ ಶ್ಲಾಘನೀಯ ಎಂದರು.

 ಸಮುದಾಯ ಸೇವಾ ನಿರ್ದೇಶಕಿ ಶಿವಲೀಲಾ ಕಂಪ್ಲಿ ಅವರು ಮಾತನಾಡಿ, ಶೀತಲ ಚಿಲಮಿ ಅವರು ಸ್ಟಾರ್ಟ್ ಅಪ್ ಗಳು ಮತ್ತು ಉದ್ಯಮಗಳಿಂದ ಹಿಡಿದು ಕಾರ್ಪೊರೇಟ್ ಸಂಸ್ಥೆಗಳ ವರೆಗೆ ವ್ಯವಹಾರದಲ್ಲಿ ಮಹಿಳೆಯರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ವಿಭಾಗ ಮಾರ್ಗದರ್ಶನ, ಆರ್ಥಿಕತೆ, ಸಾಕ್ಷರತೆ, ಮಾರುಕಟ್ಟೆ, ಸಂಪರ್ಕ, ಅವಕಾಶ ಮತ್ತು ವೈವಿಧ್ಯಮಯ ಕೈಗಾರಿಕಾ ವಲಯಗಳಲ್ಲಿ ಹೊಸ ಎತ್ತರಕ್ಕೆ ಏರಲು ವೇದಿಕೆ ಒದಗಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.

 ಲಿಂಗಾಯತ ಬಿಸಿನೆಸ್ ಫೋರಂ ಸಂಸ್ಥಾಪಕ ಸದಸ್ಯ ಮಲ್ಲಿಕಾರ್ಜುನ ಮೂದನೂರ ಅವರು ಲಿಂಗಾಯತ ಬಿಸಿನೆಸ್ ಫೋರಂನ ಪ್ರಮುಖ ಮಜಲುಗಳನ್ನು ಸವಿಸ್ತಾರವಾಗಿ ವಿವರಿಸಿದರು. 

ಕಾರ್ಯಕಾರಿ ಸಮಿತಿ ಅಧ್ಯಕ್ಷ ಲಿಂಗರಾಜ ಜಗಜಂಪಿ ಅವರು ಲಿಂಗಾಯತ ಬಿಸಿನೆಸ್ ಫೋರಂನ ಮಹಿಳಾ ಘಟಕದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಲಿಂಗಾಯತ ಧರ್ಮದ ತಳಹದಿ ಆಗಿರುವ ಸಮಾನತೆಯ ತತ್ವವನ್ನು ಸಾರುವ ಕಾರ್ಯದಲ್ಲಿ ಇದೊಂದು ಮಹತ್ತರ ಹೆಜ್ಜೆಯಾಗಿದೆ ಎಂದರು. ಲಿಂಗಾಯತ ಬಿಸಿನೆಸ್ ಫೋರಂನ ಮಹಿಳಾ ಘಟಕದ ಅಧ್ಯಕ್ಷೆ ಶೀತಲ ಚಿಲಮಿ ಮಾತನಾಡಿ, ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಈ ವೇದಿಕೆ ಮೂಲಕ ಸಮಾಜಕ್ಕೆ ತೋರಿಸಬೇಕು. ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡುವಲ್ಲಿ ಸ್ವಾವಲಂಬಿ ಮತ್ತು ಯಶಸ್ವಿ ಮಹಿಳಾ ಉದ್ಯಮಿಗಳ ಪರಂಪರೆಯನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. 

ಪದಾಧಿಕಾರಿಗಳು:  ಕಾರ್ಯಕಾರಿ ಸಮಿತಿಗೆ ಶೀತಲ ಚಿಲಮಿ ಅಧ್ಯಕ್ಷೆ, ಶಿವಲೀಲಾ ಕಂಪ್ಲಿ, ಜ್ಯೋತಿ ನಿಂಬಾಳ ಖಜಾಂಚಿ,  ಡಾ.ಜ್ಯೋತಿ ಮಾಸ್ತಿಹೊಳಿ, ಉಪಾಧ್ಯಕ್ಷೆ ಆಶಾ ಪಾಟೀಲ, ನಿರ್ದೇಶಕಿ ಅಶ್ವಿನಿ ಪಾಟೀಲ, ರೇಖಾ ಕಳ್ಳಿಮನಿ ಸಾರ್ವಜನಿಕ ಸ್ವರೂಪದ ನಿರ್ದೇಶಕಿಯರು.

ಆಡಳಿತ ಮಂಡಳಿ ಟ್ರಸ್ಟಿಗಳಾದ ಈರಣ್ಣ ದೇಯನ್ನವರ, ರಾಜೀವ ಶೀಗಿಹಳ್ಳಿ, ಲಕ್ಷ್ಮಿಕಾಂತ ಗುರವ, ವಿಜಯ ಪಾಟೀಲ, ಮಹಾಂತೇಶ ಪುರಾಣಿಕ ಉಪಸ್ಥಿತರಿದ್ದರು. ಈರಾ ತಿಗಡಿ ಹಾಗೂ ಆರೋಹಿ ಶೀಲವಂತ ಪ್ರಾರ್ಥಿಸಿದರು. ಶಿವಲೀಲಾ ಪ್ರಣಾಳಿಕೆ ಮಂಡಿಸಿದರು. ಸಂತೋಷ ಪಾವಟೆ ಮತ್ತು ಜ್ಯೋತಿ ನಿಂಬಾಳ ಪರಿಚಯಿಸಿದರು. ಲಿಂಗರಾಜ ಜಗಜಂಪಿ ಸ್ವಾಗತಿಸಿದರು. ಮಡಿವಾಳಪ್ಪ ತಿಗಡಿ ನಿರೂಪಿಸಿದರು. ಕಾರ್ಯದರ್ಶಿ ಸಚಿನ್ ಬೈಲವಾಡ ವಂದಿಸಿದರು.

Author
D Media 24
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*₹2,000ಕ್ಕಿಂತ ಹೆಚ್ಚಿನ UPI ವಹಿವಾಟುಗಳಿಗೆ MDR ಶುಲ್ಕ; ಅಕ್ಟೋಬರ್ 15ರಿಂದ ಹೊಸ ನಿಯಮ**ಖಾನಾಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ; ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಕೃತಕ ಮಳೆಯ ಬೇಡಿಕೆ ತಹಶೀಲ್ದಾರ್‌ಗೆ ರೈತರ ಮನವಿ; ಬೆಳೆ ನಷ್ಟದ ಪಂಚನಾಮೆ ನಡೆಸಿ ತಕ್ಷಣ ಪರಿಹಾರ ನೀಡುವಂತೆ ಒತ್ತಾಯ**ಕಂಗ್ರಾಳಿ ಬಿಕೆಯ ಕಸದ ಬ್ಲ್ಯಾಕ್ ಸ್ಪಾಟ್ ತೆರವು; ಅಮಿತ್ ಸುತಾರ್ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ಕಸ ಹಾಕುವವರಿಗೆ ₹500 ದಂಡ; ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ**ಅಲತಗಾ ಕ್ರಾಸ್ ಬಳಿ ಬೇಕರಿಗೆ ಬೆಂಕಿ; ₹12 ಲಕ್ಷ ನಷ್ಟ, ಮಲಗೌಡ ಪಾಟೀಲ ಭೇಟಿ**ಚವ್ಹಾಟಗಲ್ಲಿಯ ಫ್ರಿಡ್ಜ್ ಸ್ಫೋಟದ ಸ್ಥಳಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ*ನಗರ ಪಂಚಾಯಿತಿಯ ನಿರ್ಲಕ್ಷ್ಯ ಆಡಳಿತದ ವಿರುದ್ಧ ವಿವೇಕ ಗಿರಿ ಅವರ ಎಲ್ಗಾರ್; ಸೆಪ್ಟೆಂಬರ್ 16 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ.*ಗೋವಾ ವಿಧಾನಸಭೆ ಚುನಾವಣೆ: AICC ಸಂಯೋಜಕರಾಗಿ ಮೃಣಾಲ್ ಹೆಬ್ಬಾಳಕರ್ ನೇಮಕ ಬೆಳಗಾವಿ ಯುವ ಮುಖಂಡನಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಮಹತ್ವದ ಜವಾಬ್ದಾರಿ**ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ವೇಗ: ಲಕ್ಷ್ಮೀ ಹೆಬ್ಬಾಳಕರ್ ಪರಿಶೀಲನೆ**ಅನಿಯಮಿತ ವಿದ್ಯುತ್ ಪೂರೈಕೆ ಖಂಡಿಸಿ ಬಿಜೆಪಿ ಪ್ರತಿಭಟನೆ; ಪಂತ ಬಾಳೇಕುಂದ್ರಿ ವಿದ್ಯುತ್ ಕೇಂದ್ರದ ಎದುರು ರಸ್ತೆ ತಡೆ**₹65 ಲಕ್ಷ ವೆಚ್ಚದಲ್ಲಿ ಶ್ರೀ ವಿಠ್ಠಲ ರುಕ್ಮಾಯಿ ಮಂದಿರ ನಿರ್ಮಾಣ ಸ್ಲ್ಯಾಬ್ ಕಾಮಗಾರಿಗೆ ಮೃಣಾಲ್ ಹೆಬ್ಬಾಳಕರ್ ಸೇರಿ ಗಣ್ಯರಿಂದ ಪೂಜೆ*