LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

*₹2,000ಕ್ಕಿಂತ ಹೆಚ್ಚಿನ UPI ವಹಿವಾಟುಗಳಿಗೆ MDR ಶುಲ್ಕ; ಅಕ್ಟೋಬರ್ 15ರಿಂದ ಹೊಸ ನಿಯಮ*

 

ನವದೆಹಲಿ, ಸೆಪ್ಟೆಂಬರ್ 15 : ಡಿಜಿಟಲ್ ಪಾವತಿ ಮಾಡುವ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ವ್ಯಾಪಾರಿಗಳಿಗೆ ಮಾಡುವ ₹2,000ಕ್ಕಿಂತ ಹೆಚ್ಚಿನ ಮೊತ್ತದ UPI ವಹಿವಾಟುಗಳಿಗೆ ಶೇ.0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸಲಾಗುವುದು. ಈ ಶುಲ್ಕದ ಜಾರಿ ಅಕ್ಟೋಬರ್ 15ರಿಂದ ಆರಂಭವಾಗಲಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸ್ಪಷ್ಟಪಡಿಸಿದೆ.

ಆದರೆ, ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ UPI ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಹೊಸ ನಿಯಮದ ಪ್ರಕಾರ, ₹75,000ಕ್ಕಿಂತ ಹೆಚ್ಚಿನ ಮೊತ್ತದ ಪ್ರತಿಯೊಂದು ಅರ್ಹ ವಹಿವಾಟಿಗೆ MDR ಶುಲ್ಕದ ಗರಿಷ್ಠ ಮಿತಿ ₹300 ಎಂದು ನಿಗದಿಪಡಿಸಲಾಗಿದೆ. ವಿಶೇಷವೆಂದರೆ ಈ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡುವಂತಿಲ್ಲ. ವ್ಯಾಪಾರಿಗಳು MDR ಶುಲ್ಕದ ಆರ್ಥಿಕ ಹೊರೆಯನ್ನು ಗ್ರಾಹಕರ ಮೇಲೆ ಹಾಕದಂತೆ ಬ್ಯಾಂಕ್‌ಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ.

ಇದರ ಜೊತೆಗೆ, UPI ಆ್ಯಪ್‌ಗಳ ಮೂಲಕ ವಹಿವಾಟು ನಡೆಸುವ ಗ್ರಾಹಕರಿಂದ ಗುಪ್ತ ಶುಲ್ಕ ಅಥವಾ ಪ್ಲಾಟ್‌ಫಾರ್ಮ್ ಶುಲ್ಕ ವಸೂಲಿ ಮಾಡುವುದಕ್ಕೂ ನಿಷೇಧ ಹೇರಲಾಗಿದೆ.

ಕಾನೂನು ತಿದ್ದುಪಡಿಯ ಬಳಿಕ ನಿರ್ಧಾರ

ಈ ನಿರ್ಧಾರದ ಹಿಂದೆ ಪಾವತಿ ಮತ್ತು ಸೆಟಲ್‌ಮೆಂಟ್‌ಗೆ ಸಂಬಂಧಿಸಿದ ಕಾನೂನಿನಲ್ಲಿ ಮಾಡಲಾದ ತಿದ್ದುಪಡಿ ಪ್ರಮುಖವಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ Payment and Settlement Systems Act, 2007ರ ಸೆಕ್ಷನ್ 10-Aಗೆ ತಿದ್ದುಪಡಿ ಮಾಡಲಾಗಿದೆ. ಇದರ ನಂತರ ಡಿಜಿಟಲ್ ಪಾವತಿಗಳ ಮೇಲಿನ MDR ಶುಲ್ಕಕ್ಕೆ ಸಂಬಂಧಿಸಿದ ನಿಯಮ ಜಾರಿಗೆ ತರಲಾಗಿದೆ.

ಸಣ್ಣ ಮೊತ್ತದ ವಹಿವಾಟುಗಳಿಗೆ ಪರಿಣಾಮವಿಲ್ಲ

ವ್ಯಾಪಾರಿಗಳಿಗೆ ನಡೆಯುವ UPI ವಹಿವಾಟುಗಳಲ್ಲಿ ಬಹುತೇಕ ವಹಿವಾಟುಗಳು ಕಡಿಮೆ ಮೊತ್ತದವುಗಳಾಗಿವೆ. ₹2,000ವರೆಗಿನ ವಹಿವಾಟುಗಳ ಪ್ರಮಾಣ ಸುಮಾರು ಶೇ.95ರಷ್ಟಿದೆ ಎಂದು ತಿಳಿಸಲಾಗಿದೆ. ಹೀಗಾಗಿ ಹೊಸ MDR ವ್ಯವಸ್ಥೆಯಿಂದ ಬಹುತೇಕ ಸಣ್ಣ ಮೊತ್ತದ UPI ವಹಿವಾಟುಗಳಿಗೆ ನೇರ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇನ್ನು, ಗ್ರಾಹಕರಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆಯೇ ಎಂಬುದರ ಮೇಲೂ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ.

Author
D Media 24
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*₹2,000ಕ್ಕಿಂತ ಹೆಚ್ಚಿನ UPI ವಹಿವಾಟುಗಳಿಗೆ MDR ಶುಲ್ಕ; ಅಕ್ಟೋಬರ್ 15ರಿಂದ ಹೊಸ ನಿಯಮ**ಖಾನಾಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ; ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಕೃತಕ ಮಳೆಯ ಬೇಡಿಕೆ ತಹಶೀಲ್ದಾರ್‌ಗೆ ರೈತರ ಮನವಿ; ಬೆಳೆ ನಷ್ಟದ ಪಂಚನಾಮೆ ನಡೆಸಿ ತಕ್ಷಣ ಪರಿಹಾರ ನೀಡುವಂತೆ ಒತ್ತಾಯ**ಕಂಗ್ರಾಳಿ ಬಿಕೆಯ ಕಸದ ಬ್ಲ್ಯಾಕ್ ಸ್ಪಾಟ್ ತೆರವು; ಅಮಿತ್ ಸುತಾರ್ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ಕಸ ಹಾಕುವವರಿಗೆ ₹500 ದಂಡ; ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ**ಅಲತಗಾ ಕ್ರಾಸ್ ಬಳಿ ಬೇಕರಿಗೆ ಬೆಂಕಿ; ₹12 ಲಕ್ಷ ನಷ್ಟ, ಮಲಗೌಡ ಪಾಟೀಲ ಭೇಟಿ**ಚವ್ಹಾಟಗಲ್ಲಿಯ ಫ್ರಿಡ್ಜ್ ಸ್ಫೋಟದ ಸ್ಥಳಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ*ನಗರ ಪಂಚಾಯಿತಿಯ ನಿರ್ಲಕ್ಷ್ಯ ಆಡಳಿತದ ವಿರುದ್ಧ ವಿವೇಕ ಗಿರಿ ಅವರ ಎಲ್ಗಾರ್; ಸೆಪ್ಟೆಂಬರ್ 16 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ.*ಗೋವಾ ವಿಧಾನಸಭೆ ಚುನಾವಣೆ: AICC ಸಂಯೋಜಕರಾಗಿ ಮೃಣಾಲ್ ಹೆಬ್ಬಾಳಕರ್ ನೇಮಕ ಬೆಳಗಾವಿ ಯುವ ಮುಖಂಡನಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಮಹತ್ವದ ಜವಾಬ್ದಾರಿ**ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ವೇಗ: ಲಕ್ಷ್ಮೀ ಹೆಬ್ಬಾಳಕರ್ ಪರಿಶೀಲನೆ**ಅನಿಯಮಿತ ವಿದ್ಯುತ್ ಪೂರೈಕೆ ಖಂಡಿಸಿ ಬಿಜೆಪಿ ಪ್ರತಿಭಟನೆ; ಪಂತ ಬಾಳೇಕುಂದ್ರಿ ವಿದ್ಯುತ್ ಕೇಂದ್ರದ ಎದುರು ರಸ್ತೆ ತಡೆ**₹65 ಲಕ್ಷ ವೆಚ್ಚದಲ್ಲಿ ಶ್ರೀ ವಿಠ್ಠಲ ರುಕ್ಮಾಯಿ ಮಂದಿರ ನಿರ್ಮಾಣ ಸ್ಲ್ಯಾಬ್ ಕಾಮಗಾರಿಗೆ ಮೃಣಾಲ್ ಹೆಬ್ಬಾಳಕರ್ ಸೇರಿ ಗಣ್ಯರಿಂದ ಪೂಜೆ*