LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಹಿರಿಯ ಪತ್ರಕರ್ತ ನೌಶಾದ್ ಬಿಜಾಪುರೆ ಅವರಿಗೆ ‘ಲೋಕದರ್ಶನ’ ಪ್ರಶಸ್ತಿ ಪ್ರದಾನ

ಬೆಳಗಾವಿ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ದಶಕಗಳ ಕಾಲ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ಅಸೋಸಿಯೇಟ್ ಎಡಿಟರ್ ನೌಶಾದ್ ಬಿಜಾಪುರೆ ಅವರನ್ನು ‘ಲೋಕದರ್ಶನ’ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ‘ಲೋಕದರ್ಶನ’ ದಿನಪತ್ರಿಕೆಯ ಸಂಸ್ಥಾಪಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿವಂಗತ ಎಂ.ಬಿ. ದೇಸಾಯಿ ಅವರ ಸ್ಮರಣಾರ್ಥ ಸ್ಥಾಪಿಸಲಾಗಿರುವ ಪ್ರತಿಷ್ಠಿತ ‘ಲೋಕದರ್ಶನ’ ಪ್ರಶಸ್ತಿಯನ್ನು ನೌಶಾದ್ ಬಿಜಾಪುರೆ ಅವರಿಗೆ ಪ್ರದಾನ ಮಾಡಲಾಯಿತು.

ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಹಾಗೂ ಜಯಲಕ್ಷ್ಮಿ ಶರದಚಂದ್ರ ದೇಸಾಯಿ ಅವರು ನೌಶಾದ್ ಬಿಜಾಪುರೆ ಅವರನ್ನು ಸನ್ಮಾನಿಸಿ, ಪ್ರಶಸ್ತಿ ಪ್ರದಾನ ಮಾಡಿದರು.

ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನೌಶಾದ್ ಬಿಜಾಪುರೆ ಅವರ ಸೇವೆಯನ್ನು ಗಣ್ಯರು ಇದೇ ವೇಳೆ ಶ್ಲಾಘಿಸಿದರು. ವಸ್ತುನಿಷ್ಠ ಹಾಗೂ ನಿರ್ಭೀತ ಪತ್ರಿಕೋದ್ಯಮದ ಮೂಲಕ ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗಿರುವ ಅವರ ಕೊಡುಗೆ ಪ್ರಶಸ್ತಿಗೆ ಮತ್ತಷ್ಟು ಗೌರವ ತಂದಿದೆ ಎಂದು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಶ್ರೀಶೈಲ್ ಮಠದ, ಮಂಜುನಾಥ ಪ್ಯಾಟಿ, ಅಪ್ಪಣ್ಣ ಮೇತ್ರಿ, ಸಾಗರ್ ಚೌಗಲೆ, ಧನಂಜಯ ಸೇರಿದಂತೆ ಪತ್ರಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Author
D Media 24
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*₹2,000ಕ್ಕಿಂತ ಹೆಚ್ಚಿನ UPI ವಹಿವಾಟುಗಳಿಗೆ MDR ಶುಲ್ಕ; ಅಕ್ಟೋಬರ್ 15ರಿಂದ ಹೊಸ ನಿಯಮ**ಖಾನಾಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ; ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಕೃತಕ ಮಳೆಯ ಬೇಡಿಕೆ ತಹಶೀಲ್ದಾರ್‌ಗೆ ರೈತರ ಮನವಿ; ಬೆಳೆ ನಷ್ಟದ ಪಂಚನಾಮೆ ನಡೆಸಿ ತಕ್ಷಣ ಪರಿಹಾರ ನೀಡುವಂತೆ ಒತ್ತಾಯ**ಕಂಗ್ರಾಳಿ ಬಿಕೆಯ ಕಸದ ಬ್ಲ್ಯಾಕ್ ಸ್ಪಾಟ್ ತೆರವು; ಅಮಿತ್ ಸುತಾರ್ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ಕಸ ಹಾಕುವವರಿಗೆ ₹500 ದಂಡ; ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ**ಅಲತಗಾ ಕ್ರಾಸ್ ಬಳಿ ಬೇಕರಿಗೆ ಬೆಂಕಿ; ₹12 ಲಕ್ಷ ನಷ್ಟ, ಮಲಗೌಡ ಪಾಟೀಲ ಭೇಟಿ**ಚವ್ಹಾಟಗಲ್ಲಿಯ ಫ್ರಿಡ್ಜ್ ಸ್ಫೋಟದ ಸ್ಥಳಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ*ನಗರ ಪಂಚಾಯಿತಿಯ ನಿರ್ಲಕ್ಷ್ಯ ಆಡಳಿತದ ವಿರುದ್ಧ ವಿವೇಕ ಗಿರಿ ಅವರ ಎಲ್ಗಾರ್; ಸೆಪ್ಟೆಂಬರ್ 16 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ.*ಗೋವಾ ವಿಧಾನಸಭೆ ಚುನಾವಣೆ: AICC ಸಂಯೋಜಕರಾಗಿ ಮೃಣಾಲ್ ಹೆಬ್ಬಾಳಕರ್ ನೇಮಕ ಬೆಳಗಾವಿ ಯುವ ಮುಖಂಡನಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಮಹತ್ವದ ಜವಾಬ್ದಾರಿ**ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ವೇಗ: ಲಕ್ಷ್ಮೀ ಹೆಬ್ಬಾಳಕರ್ ಪರಿಶೀಲನೆ**ಅನಿಯಮಿತ ವಿದ್ಯುತ್ ಪೂರೈಕೆ ಖಂಡಿಸಿ ಬಿಜೆಪಿ ಪ್ರತಿಭಟನೆ; ಪಂತ ಬಾಳೇಕುಂದ್ರಿ ವಿದ್ಯುತ್ ಕೇಂದ್ರದ ಎದುರು ರಸ್ತೆ ತಡೆ**₹65 ಲಕ್ಷ ವೆಚ್ಚದಲ್ಲಿ ಶ್ರೀ ವಿಠ್ಠಲ ರುಕ್ಮಾಯಿ ಮಂದಿರ ನಿರ್ಮಾಣ ಸ್ಲ್ಯಾಬ್ ಕಾಮಗಾರಿಗೆ ಮೃಣಾಲ್ ಹೆಬ್ಬಾಳಕರ್ ಸೇರಿ ಗಣ್ಯರಿಂದ ಪೂಜೆ*